ಅಂತೂ ಇಂತೂ ಪ್ರಶಸ್ತಿ ಬಂತು. ನಮ್ಮ ಶುನಕಕ್ಕೆ. ಆದರೆ ಇದರಲ್ಲಿ ಕೆಲಸ ,ಮಾಡಿದ ಶುನಕಗಳಿಗೆ ಅದರಿಂದ ಬರುವ ಲಾಭ ಏನೋ? ನಾಯಿಗಳಂತೆ ದುಡಿದ್ದಿದ್ದಷ್ಟೇ ಬಂತು ಎಂತಾಗಬಾರದು. ಅದು ಒಂದು ಕಥೆ ಕೇಳಿದ್ದೆ, ಅನೇಕ ವರ್ಷಗಳ ಹಿಂದೆ ಆಕಾಶವಾಣಿಯಲ್ಲಿ. ಒಬ್ಬ ನಿರ್ದೇಶಕ ಇರುತ್ತಾನೆ, ಬಹಳ ಸಾಮಾಜಿಕ ಕಳಕಳಿ ಯಿರುವ ಚಿತ್ರಗಳನ್ನು ತೆಗೆಯುತ್ತಿರುತ್ತಾನೆ. ಅವನ ಮನೆಗೆ ಮಧ್ಯರಾತ್ರಿಯಲ್ಲಿ ಒಂದು ಹೆಣ್ಣು ಮಗಳು ಬಂದು, ಬಾಗಿಲು ತಟ್ಟುತ್ತಾಳೆ. ಕಾಪಾಡಿ, ಕಾಪಾಡಿ, ಎಂದು. ಅವನೂ ಕೇಳಿದರೂ ಕೇಳದಂತೆ ಸುಮ್ಮನಿದ್ದು ಬಿಡುತ್ತಾನೆ. ಅಲ್ಲಿಗೆ ಅವನ ಸಾಮಾಜಿಕ ಕಳಕಳಿಯಿರುವ ಚಿತ್ರ ಕೇವಲ ದುಡ್ಡು ಮಾಡುವುದಕ್ಕೆ ಸೀಮಿತ. ನಮ್ಮ slumdog ನ ಕಥೆಯೂ ಹೀಗೆ ಆಗಬಾರದು.
ಹಾಲಿವುಡ್, ಬಾಲಿವುಡ್ ಸೇರಿ ಬಂದ ಜಯ, ಇತ್ಯಾದಿ, ಇತ್ಯಾದಿ. ಅವರಿಗೂ ಇದು ನಮ್ಮಿಬ್ಬರ ಶ್ರಮದ ಫಲ ಎಂಬ ಭಾವನೆ ಇರುತ್ತದೆಯೇ?
ಏನೋ ನಾನಿನ್ನೂ ಚಿತ್ರ ನೋಡಿಲ್ಲ, ಅವರ ಹೇಳಿಕೆಗಳನ್ನು ಕೇಳಿಲ್ಲ. ನಿಮಗೇನಾದರೂ ತಿಳಿದಿದ್ದರೆ ತಿಳಿಸಿ.